
ಹಾಸ್ಯ ನಟ ಮೈಕಲ್ ಮಧು ಇನ್ನಿಲ್ಲ....
ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯನಟ ಮೈಕಲ್ ಮಧು ಇಂದು ಕಿಮ್ಸ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಓಂ, ಶ್, ಸೂರ್ಯವಂಶ ಸೇರಿದಂತೆ 85 ಕ್ಕೂ ಅಧಿಕ ಸಿನಿಮಾಗಳಲ್ಲಿ ಮೈಕಲ್ ಮಧು ಹಾಸ್ಯ ನಟರಾಗಿ ಕಾಣಿಸಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಮನೆಯಲ್ಲಿ ಕಾಲು ಜಾರಿ ಬಿದ್ದು ಅಸ್ವಸ್ಥರಾಗಿದ್ದ ಮೈಕಲ್ ಮಧು ಅವರನ್ನು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಬುಧವಾರ ವೀಧಿವಶರಾಗಿದ್ದಾರೆ. ಮೈಕಲ್ ಮಧು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.