.jpeg)
ಲಾಕ್ ಡೌನ್ ಬಿಟ್ಟು ಬೇರೆ ದಾರಿಯಿಲ್ಲ : ದೇಶದ ಜನರಲ್ಲಿ ಕ್ಷಮೆಯಾಚಿಸಿದ ಪ್ರಧಾನಿ ಮೋದಿ.
ನವದೆಹಲಿ : ದೇಶದಲ್ಲಿ ದಿನ ಕಳೆದಂತೆ ತನ್ನ ವ್ಯಾಪ್ತಿಯನ್ನು ಆಘಾತಕಾರಿ ರೀತಿಯಲ್ಲಿ ಹೆಚ್ಚಿಸಿಕೊಳ್ಳುತ್ತಿರುವ ಕೊರಾನಾ ವೈರಸ್ ನ ನಿಯಂತ್ರಣಕ್ಕೆ ಲಾಕ್ ಡೌನ್ ಅನಿವಾರ್ಯವಾಗಿದೆ. ಲಾಕ್ ಡೌನ್ ನಿಂದ ತೊಂದರೆಯಾಗಿದ್ದರೆ ದಯಮಾಡಿ ಕ್ಷಮಿಸಿ ಎಂದು ಪ್ರಧಾನಿ ಮೋದಿ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಭಾನುವಾರ ಬೆಳಿಗ್ಗೆ ತಮ್ಮ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕೋವಿಡ್ -19 ಅನ್ನು ನಿಯಂತ್ರಿಸಲು ಲಾಕ್ ಡೌನ್ ಅನಿವಾರ್ಯವಾಗಿದೆ. ಸ್ವಲ್ಪ ದಿನ ಎಲ್ಲವನ್ನೂ ಸಹಿಸಿಕೊಳ್ಳಿ ಎಂದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಮೋದಿ ಬಡವರನ್ನು ಪ್ರೀತಿಯಿಂದ ಕಾಣೋಣ. ಮೊದಲು ಅವರ ಹೊಟ್ಟೆ ತುಂಬಿಸಲು ಯತ್ನಿಸೋಣ. ಕೊರೊನಾ ವಿರುದ್ಧದ ಯುದ್ಧದಲ್ಲಿ ದೇಶ ಗೆಲ್ಲಲಿದೆ ಎಂದು ದೇಶದ ಜನರಲ್ಲಿ ಭರವಸೆ ತುಂಬಿದರು.