.jpeg)
ಕೊನೆಗೂ ನಿರ್ಭಯಾಗೆ ಸಿಕ್ಕಿತು ನ್ಯಾಯ : ತಿಹಾರ್ ಜೈಲಿನಲ್ಲಿ ನೇಣಿಗೆ ಕೊರಳೊಡ್ದಿದ ನಿರ್ಭಯಾ ಹಂತಕರು
ನವದೆಹಲಿ : ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯಾ ಹಂತಕರ ಗಲ್ಲು ಜಾರಿಯಲ್ಲಿನ ವಿಳಂಬಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಇಂದು ಬೆಳಿಗ್ಗೆ 5 :30 ಕ್ಕೆ ದೆಹಲಿಯ ತಿಹಾರ್ ಜೈಲಿನಲ್ಲಿ ಪ್ರಕರಣದ ನಾಲ್ಕು ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು.
ಪ್ರಕರಣದ ಅಪರಾಧಿಗಳಾದ ಮುಕೇಶ್ ಸಿಂಗ್ ( 32), ಪವನ್ ಗುಪ್ತಾ (25) , ವಿನಯ್ ಶರ್ಮ (26)
ಹಾಗೂ ಅಕ್ಷಯ್ ಕುಮಾರ್ ಸಿಂಗ್ (31) ರನ್ನು ಇಂದು ಬೆಳಿಗ್ಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಇದೇ ಮೊದಲ ಬಾರಿಗೆ ತಿಹಾರ್ ಜೈಲಿನಲ್ಲಿ ನಾಲ್ಕು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸಲಾಗಿದೆ.
ಕಾನೂನು ವ್ಯವಸ್ಥೆಯಲ್ಲಿನ ದೋಷಗಳನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಗಲ್ಲು ಜಾರಿಯಾಗುವುದನ್ನು ಮುಂದೂಡುತ್ತ ಬಂದಿದ್ದ ಅಪರಾಧಿಗಳು ಇಂದು ನಸುಕಿನ ಜಾವ ನೇಣಿಗೆ ಕೊರಳೊಡ್ಡಿದರು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಅತ್ಯಾಚಾರಿಗಳ ಸಾವನ್ನು ಸಂಭ್ರಮಿಸುತ್ತಿದ್ದಾರೆ.