5.jpeg)
ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ.!!
ಯಾದಗಿರಿ:-ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೆಂಬಾವಿ ಸಮೀಪದ ಗೌಡಗೇರಾ ರಸ್ತೆಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಈ ಒಂದು ಅಪಘಾತದಲ್ಲಿ ಶರಣಪ್ಪ ಓಂಕಾರಪ್ಪ(25) ಶರಣು ಷಣ್ಮುಖಪ್ಪ(26),ತಿರುಪತಿ(25) ಮೃತಪಟ್ಟರೆ,
ಇನ್ನು ಈ ಅಪಘಾತದಲ್ಲಿ ಬಾಲಪ್ಪ ಗೌಡ,ಮಲ್ಲಣ್ಣ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ,ಚಿಕಿತ್ಸೆಗಾಗಿ ಕಲಬುರಾಗಿಗೆ ಕಳುಹಿಸಲಾಗಿದೆ.ಈ ಪ್ರಕರಣವು ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.