Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 419

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 456

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 481

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 494

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 519

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 532
Alma

‘ಹಿಂದೂ ಮಹಾನ್​​ ಸಂತ‘ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಇನ್ನಿಲ್ಲ

ಉಡುಪಿ: ತೀವ್ರ ಉಸಿರಾಟದ ಸಮಸ್ಯೆ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಅಧೋಕ್ಷಜ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಇಂದು ನಮ್ಮನಗಲಿದ್ದಾರೆ. ಚಿಕಿತ್ಸೆ ಫಲಖಾರಿಯಾಗದೆ ಪೇಜಾವರ ಶ್ರೀಗಳು ಬೆಳಿಗ್ಗೆಯೇ ಕೊನೆಯುಸಿರೆಳೆದಿದ್ಧಾರೆ  ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇನ್ನು ಶ್ರೀಗಳ ದರ್ಶನ ಪಡೆಯ ಬಯಸುವ ಭಕ್ತರು ಬೆಳಗ್ಗೆ 9 ಗಂಟೆಯ ನಂತರ ಪೇಜಾವರ ಮಠಕ್ಕೆ ಬಂದು ದರ್ಶನ‌ ಪಡೆಯಬಹುದು ಎಂದು ಮಠದ ವಕ್ತಾರರು ತಿಳಿಸಿದ್ದಾರೆ. ಅಂತೆಯೇ ನಾಳೆ ಮಧ್ಯಾಹ್ನದವರೆಗೂ ಸಾರ್ಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ. ಹಾಗಯೇ ನಾಳೆ ಸಂಜೆ ವೇಳೆಗೆ ಪೇಜಾವರ ಮಠದ ಆವರಣದಲ್ಲಿಯೇ ಅಂತ್ಯ ಸಂಸ್ಕಾರ ನಡೆಯುವ ಸಾಧ್ಯತೆ ಇದೆ.
ಶ್ರೀಗಳ ನಿಧನದ ಬಗ್ಗೆ ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಿಎಂ ಬಿ.ಎಸ್​​ ಯಡಿಯೂರಪ್ಪ ಮತ್ತಲವು ದೇಶದ ಅಗ್ರಗಣ್ಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಶ್ರೀಗಳ ಅಗಲಿಕೆಯಿಂದ ನಾಡಿಗೆ ಅಪಾರ ನಷ್ಟವಾಗಿದೆ. ರಾಜ್ಯದಲ್ಲಿ ಮೂರು ದಿನಗಳ ಕಾಲ ಶ್ರೀಗಳ ಶೋಕಾಚರಣೆ ಮಾಡಲಾಗುವುದು. ಅಲ್ಲದೇ ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನಡೆಸಲಾಗುವುದು" ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಪೇಜಾವರ ಶ್ರೀಗಳ ಅಗಲಿಕೆಗೆ ದೇಶದ ಅಗ್ರಗಣ್ಯ ನಾಯಕರಂತೆಯೇ ಉಡುಪಿ ಮಠದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಭಕ್ತರು ಕಂಬನಿ ಮಿಡಿದಿದ್ದಾರೆ.