
ಪೇಜಾವರ ಶ್ರೀಗಳು ಯತಿಶ್ರೇಷ್ಠರು; ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ; ಪ್ರಧಾನಿ ಮೋದಿ ಸಂತಾಪ
ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವೇಶ ತೀರ್ಥ ಸ್ವಾಮೀಜಿ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ಧಾರೆ. ಶ್ರೀಗಳ ನಿಧನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
"ಪೇಜಾವರ ಶ್ರೀಗಳು ಅಪರೂಪದ ಯತಿಶ್ರೇಷ್ಠರು. ಲಕ್ಷಾಂತರ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಸೌಹಾರ್ದ ಬದುಕಿಗಾಗಿ ಸದಾ ಹಾತೊರೆದವರು". ಕಳೆದ ಗುರುಪೂರ್ಣಿಮೆ ದಿನವೇ ನಾನು ಪೇಜಾವರ ಶ್ರೀಗಳ ಭೇಟಿ ಮಾಡಿದ್ದೆ. ಜೊತೆಗೆ ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದೆ. ಇವರು ನಮಗೆ ಸ್ಪೂರ್ತಿ. ನಾನು ಶ್ರೀಗಳಿಂದ ಸಾಕಷ್ಟು ಮಾರ್ಗದರ್ಶನ ಪಡೆದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.