.jpeg)
ರಾಜ್ಯಸಭಾ ಸದಸ್ಯರಾಗಿ ರಂಜನ್ ಗೊಗೊಯಿ ಪ್ರಮಾಣ ವಚನ....
ನವದೆಹಲಿ : ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಂಜನ್ ಗೊಗೊಯಿ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ರಾಷ್ಟ್ರಪತಿ ರಾಮನಾಥ್ ಕೊವೀಂದ್ ನಾಮ ನಿರ್ದೇಶನ ಮಾಡಿದ್ದರು. ಅದರಂತೆ ಇಂದು ಬೆಳಿಗ್ಗೆ ಪತ್ನಿ ರೂಪಾಂಜಲಿ ಗೋಗೊಯಿಯೊಂದಿಗೆ ಸಂಸತ್ ಗೆ ಆಗಮಿಸಿದ ರಂಜನ್ ಗೋಗೊಯಿ ಪ್ರಮಾಣ ವಚನ ಸ್ವೀಕರಿಸಿದರು.
ರಂಜನ್ ಗೋಗೊಯಿ ಸುಪ್ರೀಂ ಕೋರ್ಟ್ ನ 46 ನೇ ಮುಖ್ಯ ನ್ಯಾಯಮೂರ್ತಿಯಾಗಿ
ಅಕ್ಟೋಬರ್ 3 ,2108 ರಿಂದ ನವೆಂಬರ್ 17, 2019 ರ ವರೆಗೆ ಕಾರ್ಯ ನಿರ್ವಹಿಸಿದ್ದರು.