
ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ.!
ಉಪ್ಪಿನಂಗಡಿ:- ಬಾವಿಯಲ್ಲಿ ಯುವಕನೋರ್ವನ ಮೃತದೇಹವು 34 ನೆಕ್ಕಿಲಾಡಿಯ ಶಾಂತ್ಯಡ್ಕ ಎಂಬಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.
ಮೃತರನ್ನು ಸ್ಥಳೀಯ ನಿವಾಸಿ ವಿಠಲ ಎಂದು ಗುರುತಿಸಲಾಗಿದೆ. ಅವರ ಮನೆ ಪಕ್ಕದಲ್ಲಿ ಇರುವ ಖಾಸಗಿ ವ್ಯಕ್ತಿಯೋರ್ವರ ಬಾವಿಯಲ್ಲಿ ಇಂದು ಬೆಳಗ್ಗೆ ಮೃತದೇಹ ಕಂಡುಬಂದಿದೆ. ಇದು ಆತ್ಮಹತ್ಯೆಯೋ? ಆಕಸ್ಮಿಕ ಸಾವೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.