Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 419

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 456

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 481

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 494

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 519

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 532
Alma

ಶ್ರೀಲಂಕಾ ಟಿ-20,ಆಸ್ಟ್ರೇಲಿಯಾ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ:ಲಂಕಾ ವಿರುದ್ಧ ರೋಹಿತ್ ಗೆ ವಿಶ್ರಾಂತಿ

ಶ್ರೀಲಂಕಾ ಟ್ವೆಂಟಿ -20,ಆಸ್ಟ್ರೇಲಿಯಾ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ:ಲಂಕಾ ವಿರುದ್ಧ ರೋಹಿತ್ ಗೆ ವಿಶ್ರಾಂತಿ.....!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಶ್ರೀಲಂಕಾ ಟ್ವೆಂಟಿ-20 ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಪ್ರಕಟಗೊಳಿಸಿದ್ದು, ಉಪನಾಯಕ ರೋಹಿತ್ ಶರ್ಮಾ ಅವರಿಗೆ ಲಂಕಾ ವಿರುದ್ಧ ನಡೆಯುವ ಟಿ20 ಸರಣಿಗೆ ವಿಶ್ರಾಂತಿ ನೀಡಿದೆ.

ರೋಹಿತ್ ಶರ್ಮ ಅವರು ವಿಶ್ವಕಪ್ 2019 ರಿಂದ ಭಾರತದ ಪರ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಆಡುತ್ತಿದ್ದಾರೆ.ಟೆಸ್ಟ್ ನಲ್ಲಿ ಓಪನರ್ ಆಗಿ ಮಿಂಚಿದ್ದಾರೆ. ನಿರಂತರ ಆಟದಿಂದ ದಣಿದಿರುವ ಶರ್ಮಾಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.

ಶ್ರೀಲಂಕಾ ಟ್ವೆಂಟಿ -20 ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ

ತಂಡಗಳು ಇಂತಿವೆ....
ಶ್ರೀಲಂಕಾ ವಿರುದ್ಧ ಟಿ-20 ಸರಣಿಗೆ: ವಿರಾಟ್ ಕೊಹ್ಲಿ (ನಾಯಕ)ಶಿಖರ್ ಧವನ್,ಕೆ ಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜ,ಕುಲದೀಪ್ ಯಾದವ್,ಜಸ್ ಪ್ರೀತ್ ಬುಮ್ರಾ, ನವದೀಪ್ ಸೈನಿ, ಶಿವಂ ದುಬೆ, ಯಜುವೇಂದ್ರ ಚಹಾಲ್, ಶಾರ್ದುಲ ಠಾಕೂರ್, ಮನೀಶ್ ಪಾಂಡೆ, ವಾಷಿಂಗ್ಟನ್ ಸುಂದರ್,ಮತ್ತು ಸಂಜು ಸ್ಯಾಮ್ಸನ್.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ: ವಿರಾಟ್ ಕೊಹ್ಲಿ (ನಾಯಕ)ಶಿಖರ್ ಧವನ್, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್(ವಿಕೆಟ್ ಕೀಪರ್), ಕೇದಾರ್ ಜಾಧವ್,ಶಿವಂ ದುಬೆ, ರವೀಂದ್ರ ಜಡೇಜ,ಕುಲದೀಪ್  ಯಾದವ್, ಯಜುವೇಂದ್ರ ಚಾಹಲ್, ನವ್ ದೀಪ್ ಸೈನಿ, ಶಾರ್ದೂಲ ಠಾಕೂರ್, ಜಸ್ ಪ್ರೀತ್ ಬೂಮ್ರಾ.