
ಮುಸ್ಲಿಂ ಪ್ರಚೋದಿಸಲು ಬೆಂಗಳೂರಿಗೆ ಬಂದ ಮೂರು ಅನುಮಾನಾಸ್ಪದ ವ್ಯಕ್ತಿಗಳು ಅಂದರ್
ಬೆಂಗಳೂರು: ಮಂಗಳೂರು ಮಾದರಿಯಲ್ಲಿ ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಒಳಗಿಂದೊಳಗೆ ಮಸಲತ್ತು ನಡಿಯುತ್ತಿದಿಯಾ ಅನುಮಾನಕ್ಕೆ ಸಾಕ್ಷಿಯಾಗುತ್ತಿವೆ ನಗರದಲ್ಲಿ ನಡೆಯುತ್ತಿರುವ ಘಟನೆಗಳು. ಗಲಭೆ ಸೃಷ್ಟಿಸಲು ಕೇರಳದಿಂದ ಒಂದು ತಂಡ ಬಂದು ಬೆಂಗಳೂರು ಮುಸ್ಲಿಮರನ್ನು ಪ್ರಚೋದಿಸುವ ಕೆಲಸಗಳು ನಡೆಯುತ್ತಿವೆ ಅನ್ನೊ ಅನುಮಾನಗಳು ಪೊಲೀಸರಿಗೆ ಕಾಡತೊಡಗಿದೆ. ಬುಧವಾರ ತಡರಾತ್ರಿ ಮೂವರು ಯುವಕರು ಅನುಮಾನಸ್ಪಾದವಾಗಿ ನಡುರಸ್ತೆಯಲ್ಲಿ ಗಲಾಟೆ ಮಾಡಿಕೊಂಡು ಹೋಗುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಪ್ತಿಯಲ್ಲಿದ್ದ ಸುದ್ದಗುಂಟೆ ಪಾಳ್ಯ ಪೊಲೀಸರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರನ್ನು ತಡೆದು ಯಾರು ಏನು ಅಂತೆಲ್ಲ ಪ್ರಶ್ನೆ ಮಾಡಿದ್ದಾರೆ. ಯುವಕರು ಪೊಲೀಸರಿಗೆ ನೀವು ಯಾರು? ಮೊದಲು ನೀವೇ ಐಡಿ ಕಾರ್ಡ್ ತೋರಿಸಿ ಎಂದು ಕೇಳಿದ್ದಕ್ಕೆ ನಾವು ಪೊಲೀಸರು ಎಂದು ಐಡಿ ಕಾರ್ಡ್ ತೋರಿಸಿದ್ದಾರೆ. ಪೊಲೀಸರು ಐಡಿ ಕಾರ್ಡ್ ತೋರಿಸಿದ ಮೇಲೆ ಯುವಕರು ತಮ್ಮ ಪುಂಡಾಟವನ್ನು ನಿಲ್ಲಿಸಿಲ್ಲ. ಹೀಗಾಗಿ ಮೂವರನ್ನು ವಶಕ್ಕೆ ಪಡೆದು ಸುದ್ದಗುಂಟೆ ಪಾಳ್ಯ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.