
ಸಾರ್ವಜನಿಕ ರಸ್ತೆಯಲ್ಲೇ ಹುರುಳಿ ಒಕ್ಕಣೆ : ಹೊತ್ತಿ ಉರಿದ ಓಮ್ನಿ ಕಾರು.....
ಗುಂಡ್ಲುಪೇಟೆ: ಭೀಮನಬೀಡು ಗ್ರಾಮದಿಂದ ಹುಲಸಗುಂದಿ ಗ್ರಾಮಕ್ಕೆ ಹೋಗುವ ಮಾರ್ಗ ಮದ್ಯೆದಲ್ಲಿ ರೈತರು ಹಾಕಿದ್ದ ಹುರುಳಿ ಸೊಪ್ಪು ಕೇರಳ ಮೂಲದ ಓಮಿನಿ ವಾಹನದ ಇಂಜಿನ್ಗೆ ಸಿಲುಕಿ ಬೆಂಕಿ ಹೊತ್ತಿದ ಪರಿಣಾಮವಾಗಿ ಕಾರು ಸಂಪೂರ್ಣವಾಗಿ ಭಸ್ಮವಾಗಿದ್ದು ಕಾರಿನೊಳಗಿದ್ದ ಕಲ್ಪೆಟ್ಟ ಮೂಲದ ಅಶೋಕ್ ಎಂಬುವರ ಕುಟುಂಬವು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ..
ಹುಲಸಗುಂದಿ ಮಾರ್ಗವಾಗಿ ಬರುತ್ತಿದ್ದ ಓಮ್ನಿ ಕಾರಿಗೆ ರಸ್ತೆಯಲ್ಲಿ ಹಾಕಿದ್ದ ಹುರುಳಿ ಸೊಪ್ಪು ಸಿಲುಕಿ ಬೆಂಕಿ ಹೊತ್ತಿಕೊಂಡಿದೆ ಇದನ್ನು ಗಮನಿಸಿದ ಗ್ರಾಮಸ್ಥರು ಕುಟುಂಬಸ್ಥರನ್ನು ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ , ಸ್ವಲ್ಪ ತಡವಾಗಿದ್ದರು ಎರಡು ಮಕ್ಕಳನ್ನು ಸೇರಿ 5 ಮಂದಿ ಕುಟುಂಬಸ್ಥರು ಬೆಂಕಿಗೆ ಅಹುತಿಯಾಗುತ್ತಿದ್ದರು..
ಇತ್ತೀಚಿನ ದಿನಗಳಲ್ಲಿ ರೈತರು ಹುರುಳಿ ಬೆಳೆಯನ್ನು ಒಕ್ಕಣೆ ಮಾಡಲು ಸಾರ್ವಜನಿಕ ರಸ್ತೆಯನ್ನೇ ಅವಲಂಭಿಸಿದ್ದು ವಾಹನ ಸವಾರರು ಜೀವಭಯದಿಂದಲೇ ವಾಹನ ಚಲಾಯಿಸುವ ಸ್ಥಿತಿ ನಿರ್ಮಾಣವಾಗಿದ್ದು ಇದರ ಕುರಿತು ಅನೇಕ ಬಾರಿ ವರದಿ ಬಿತ್ತರವಾಗಿದ್ದರು ಸಹ ಪೊಲೀಸ್ ಇಲಾಖೆ ಯಾವುದೇ ರೀತಿಯಾದ ಕ್ರಮ ಕೈಗೊಂಡಿಲ್ಲ ಎಂದು ವಾಹನ ಸವಾರರು ಆರೋಪ ಮಾಡುತ್ತಿದ್ದಾರೆ,
ರೈತರಲ್ಲಿ ಜಾಗೃತಿ ಮೂಡಿಸಲು ವಿಫಲವಾಯಿತೆ ಕೃಷಿ ಇಲಾಖೆ..
ರೈತರ ಬೆಳೆ ಒಕ್ಕಣೆ ಕಣ ನಿರ್ಮಿಸಲು ನರೇಗಾ ಯೋಜನೆಯಡಿ ಕೃಷಿ ಇಲಾಖೆಯಿಂದ 25 ಸಾವಿರ ಸಹಾಯಧನವಿದ್ದರೂ ಸಹ ರೈತರು ಇದರ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಇದಕ್ಕೆ ಮೂಲಕಾರಣ ಕೃಷಿ ಇಲಾಖೆಯ ನಿರ್ಲಕ್ಷ್ಯ ಎನ್ನಲಾಗುತ್ತಿದೆ..
ಸಕಾಲದಲ್ಲಿ ರೈತರಿಗೆ ಒಕ್ಕಣೆ ಕಣ ಇತ್ಯಾಧಿಗಳ ಕುರಿತು ಮಾರ್ಗಧರ್ಶನ ನೀಡದಿರುವುದೇ ಇಂದಿನ ಈ ಅವ್ಯವಸ್ಥೆಗೆ ಕಾರಣ ಎಂದು ಜನರು ಆರೋಪ ಮಾಡುತ್ತಿದ್ದಾರೆ..
ಘಟನೆ ಕುರಿತು ವಾಹನ ಮಾಲೀಕರಾದ ಅಶೋಕ್ ಅವರು ಪೊಲೀಸ್ ಠಾಣೆಗೆ ಲಿಖಿತ ರೂಪದಲ್ಲಿ ದೂರುನೀಡಿದ್ದು ಪೊಲೀಸರು ಪ್ರಕರಣವನ್ನು ಧಾಖಲಿಸಿಕೊಂಡಿದ್ದಾರೆ..
ವಾಹನ ಸವಾರರು ರೈತರ ವಿರೋಧಿಗಳಲ್ಲ ಆದರೆ ವರ್ಷಕೊಮ್ಮೆ ಬೆಳೆಯುವ ಬೆಳೆಗಳನ್ನು ರೈತರು ಅದಕ್ಕೆ ತಕ್ಕಂತೆ ಒಕ್ಕಣೆ ಕಣಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು ಆಗ ಇಂತಹ ದುರ್ಘಟನೆಗಳು ನಡೆಯುವುದಿಲ್ಲ, ಇದರಿಂದ ಆಗುವ ಸಾವು ನೋವುಗಳು ತಪ್ಪುತ್ತವೆ ಈ ನಿಟ್ಟಿನಲ್ಲಿ ರೈತರು ಇಂತಹ ಘಟನೆಗಳು ನಡೆಯದಂತೆ ಜಾಗರೂಕತೆವಹಿಸಬೇಕು ಎಂಬುದು ವಾಹನ ಸವಾರರ ಮನವಿಯಾಗಿದೆ..
ಶಾಸಕರಿಗು ತಪ್ಪದ ತೊಂದರೆ..
ಕೊಡಗಾಪುರ ಗ್ರಾಮಕ್ಕೆ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದ ಶಾಸಕ ನಿರಂಜನ್ ಕುಮಾರ್ ಅವರ ಕಾರಿಗೆ ಮಾರ್ಗ ಮದ್ಯೆದಲ್ಲಿ ಹುರುಳಿ ಸೊಪ್ಪು ಸಿಲುಕಿದ ಪರಿಣಾಮವಾಗಿ ಕೆಲವು ಸಮಯ ಪ್ರಯಾಣಕ್ಕೆ ತೊಂದರೆಯುಂಟಾದ ಪ್ರಸಂಗವು ನಡೆದಿದ್ದು ಸಿಲುಕಿದ್ದ ಹುರುಳಿ ಬಳ್ಳಿಯನ್ನು ಭೇರ್ಪಡಿಸಿ ನಂತರ ಕಾರ್ಯಕ್ರಮಕ್ಕೆ ತೆರಳಿದರು..