
ಬೆಂ.ಏರ್ಪೋರ್ಟ್ ವ್ಯಾಪ್ತಿಯಲ್ಲಿ ಭೂಕಬಳಿಕೆ-ಕೃಷ್ಣಬೈರೇಗೌಡ
ಬೆಳಗಾವಿ (Dec.31) : ಬೆಂಗಳೂರಿನ ಏರ್ಪೋರ್ಟ್ ಬಳಿ ವ್ಯಾಪ್ತಿಯಲ್ಲಿ ಹತ್ತಾರು ಕೋಟಿ ಬೆಲೆಬಾಳುವ ಆರು ಪಾಯಿಂಟ್ 10 ಎಕರೆ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳು ಕಬಳಿಸಿದ್ದಾರೆ ಈ ಬಗ್ಗೆ ಸರ್ಕಾರ ಕೂಡಲೇ ಕ್ರಮವನ್ನು ಕೈಗೊಳ್ಳಬೇಕು ಎಂದು ಶಾಸಕ ಕೃಷ್ಣಬೈರೇಗೌಡ ಒತ್ತಾಯಿಸಿದರು.
ಇತ್ತೀಚೆಗೆ ನಡೆದ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯವನ್ನು ಮಂಡಿಸಿದ ಶಾಸಕ, ಶಾಸಕ ದಿನೇಶ್ ಗುಂಡೂರಾವ್ ಅವರ ಸ್ವಾಧೀನದಲ್ಲಿದ್ದ ಆರು ಪಾಯಿಂಟ್ 10 ಎಕರೆ ಜಮೀನನ್ನು 2012ರಲ್ಲಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಸರ್ಕಾರದ ವಶದಲ್ಲಿದ್ದ ಜಾಗಕ್ಕೆ ಖಾಸಗಿ ವ್ಯಕ್ತಿಗಳು ತಶಿಲ್ದಾರ್ ನೆರವಿನಿಂದ ನಕಲಿ ದಾಖಲೆ ಸೃಷ್ಟಿಸಿ ತಳಿಯ ಗ್ರಾಮಸ್ಥರನ್ನು ಲಾಂಗು-ಮಚ್ಚು ಹಿಡಿದುಕೊಂಡು ಗ್ರಾಮಸ್ಥರನ್ನು ಬೆದರಿಸಿ ಜಾಗವನ್ನು ಅತಿಕ್ರಮಣವನ್ನು ಮಾಡಿದ್ದಾರೆ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ ಕೂಡಲೇ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಹೆಚ್ಚುವರಿ ಮಾಹಿತಿ ಅಗತ್ಯವಿದ್ದರೆ ಕಂದಾಯ ಸಚಿವ ಆರ್ ಅಶೋಕ್ ಅವರಿಂದ ಈ ಬಗ್ಗೆ ಉತ್ತರ ಕೊಡಿಸಲಾಗುವುದು ಎಂದು ಹೇಳಿದರು.