2.jpeg)
'ನಿಗರ್ವ ' ತಿಂಗಳಾಂತ್ಯಕ್ಕೆ ತೆರೆಗೆ
"ನಿಗರ್ವ " ತಿಂಗಳಾಂತ್ಯಕ್ಕೆ ತೆರೆಗೆ ...
ಹಿರಿಯ ನಟ ನಿರ್ಮಾಪಕ ನಿರ್ದೇಶಕ 'ಮುಸುರಿ ಜಯಸಿಂಹ' ಅವರು ನಿರ್ದೇಶಿಸಿ ಕಥೆ ಚಿತ್ರಕಥೆ, ಒದಗಿಸಿ ನಿರ್ಮಾಣ ಮಾಡಿರುವ ಅವರದೇ ಬ್ಯಾನರ್ 'ನಿಗರ್ವ' ಈ ವಾರ ತೆರೆಗೆ ಬರಲು ಸಿದ್ಧವಾಗಿದೆ.
೮೦ ರ ದಶಕದಿಂದಲೂ ಚಿತ್ರರಂಗದಲ್ಲಿ ತೊಡಗಿಸಿಕೊಂಡು ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿ ನಿರ್ದೇಶನ ಮಾಡಿ ನಟನೆಯನ್ನೂ ಮಾಡಿ ಬಂದಿದ್ದ ಮುಸುರಿ ಜಯಸಿಂಹ ದವರು 'ನಿಗರ್ವ' ಸಿನಿಮಾ ಮೂಲಕ
ಬ್ಲಾಕ್ ಮ್ಯಾಜಿಕ್ ಮಾಡಿ ಮಂತ್ರವಾದದಿಂದ ಚಿಕ್ಕಮಕ್ಕಳ ಹತ್ಯೆ ಮಾಡುವ ಕರಾಳ ಮುಖವನ್ನ ಪ್ರೇಕ್ಷಕರಿಗೆ
ಸಮರ್ಪಿಸಲಿದ್ದೇವೆ ಎಂದರು.
ಚಿತ್ರವನ್ನ ಬೆಂಗಳೂರು ಹಾಗೂ ಹೊನ್ನಾವರದಲ್ಲಿ 30 ದಿಗಳ ಕಾಲ ಶೂಟ್ ಮಾಡಲಾಗಿದೆ.
ಚಿತ್ರದಲ್ಲಿ ಮಂತ್ರವಾದಿಯಾಗಿ
ನಟ ನಿರ್ಮಾಪಕ ಕ್ರಿಷ್ಣೇಗೌಡ ಬಣ್ಣ ಹಚ್ಚಿದ್ದಾರೆ.
ನಾಯಕರಾಗಿ 'ಬುಲೆಟ್ ವಿನು' ,
'ಆರ್ಯನ್ ಸೂರ್ಯ' ನಾಯಕ ನಟಿಯಾಗಿ ಭಾರತಿ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ
ಚಿತ್ರಕ್ಕೆ 'ಕಥೆ' ಚಿತ್ರಕಥೆ, ನಿರ್ದೇಶನ, ನಿರ್ಮಾಣ ಜಯಸಿಂಹ ಮುಸುರಿ ಅವರೇ ನಿರ್ವಹಿಸಿದ್ದಾರೆ.
ಚಿತ್ರ ಇದೇ ತಿಂಗಳು ೩೧ ರಂದು ರಾಜ್ಯಾದಂತ ೮೦ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡ
ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.