
ಅಭಿನಯದ ಮೂಲಕ ಜನರ ಹತ್ತಿರವಾದ ಈ ಪುಟಾಣಿ ಯಾರು ಗೊತ್ತ.......!
ಈಕೆ ನೋಡಲಷ್ಟೇ ಪುಟಾಣಿ ಆದರೆ ನಟನೆ ಅಂತ ನಿಂತರೆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವ ಅದ್ಭುತ ನಟಿ. ಈ ಹಿಂದೆ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ಪುಟ್ಟ ಹುಡುಗಿ ತನ್ನ ಅಭಿನಯದಿಂದಲೆ ಜನರ ಮನೆ ಮಾತಗಿದ್ದಳು. ಈ ಕಲಾವಿದೆಯ ಹೆಸರು ಶರ್ವರಿ..ಹೌದು ಈಕೆ ಈಗ ಜೀ ವಾಹಿನಿಯಲ್ಲಿ ಕಳೆದ ವಾರದಿಂದ ಆರಂಭಗೊಂಡ ನಾಗಿಣಿ 2 ಧಾರಾವಾಹಿಯಲ್ಲಿ ಅದ್ಭತ ನಟನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.
ಈಗಾಗಲೇ ದೊಡ್ಡ ದೊಡ್ಡ ಕಲಾವಿದರ ಬಳಿ ಶಹಬ್ಬಾಸ್ ಗಿರಿ ಪಡೆದಿರುವ ಈಕೆಯನ್ನು ನಾವು ಈಗಾಗಲೇ ಸಾಕಷ್ಟು ಬಾರಿ ನೋಡಿದ್ದೇವೆ..ಅಷ್ಟೇ ಅಲ್ಲದೆ ಶರ್ವರಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದಲ್ಲಿಯೂ ಸುದೀಪ್ ಅವರ ಮಗಳ ಪಾತ್ರದಲ್ಲಿ ಅಭಿನಯಿಸಿದ್ದಾಳೆ.. ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಶರ್ವರಿ ಈ ಹಿಂದೆ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದಿದ್ದಾಗ ಅವರನ್ನೂ ಕೂಡ ಭೇಟಿ ಮಾಡಿದ್ದಳು.. ಇದೀಗ ನಾಗಿಣಿ ಧಾರಾವಾಹಿ ಮೂಲಕ ವಿಕ್ಷಕರಿಗೆ ಮನರಂಜನೆ ನೀಡುತ್ತಿದ್ದಾಳೆ.