ಇಸ್ರೋ ಮಾಜಿ ವಿಜ್ಞಾನಿಗೆ ₹1.3 ಕೋಟಿ ಪರಿಹಾರ.....

ತಿರುವನಂತಪುರಂ : ಸುಳ್ಳು ಗೂಢಚಾರಿಕೆ ಕೇಸ್ ನಲ್ಲಿ ಕಾನೂನು ಬಾಹಿರವಾಗಿ ಬಂಧನೊಕ್ಕೊಳಗಾಗಿದ್ದ  ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣ್ ಅವರಿಗೆ ಕೇರಳ ಸರ್ಕಾರ ₹ 1.3 ಕೋಟಿ ಪರಿಹಾರ ನೀಡಲು ನಿರ್ಧರಿಸಿದೆ.

ನಂಬಿ ನಾರಾಯಣ ಅವರನ್ನು ಕೇರಳದ ಇಸ್ರೋದಲ್ಲಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿಸಾಲಾಗಿತ್ತು. ನಂತರ ವಿಚಾರಣೆ ನಡೆದು ಅವರು ಆರೋಪ ಮುಕ್ತರಾದರು.

ಇನ್ನು ತಮಗಾದ ಮಾನಹಾನಿಗೆ ಪರಿಹಾರ ನೀಡಬೇಕೆಂದು ತಿರುವನಂತಪುರದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣ ಇತ್ಯರ್ಥಪಡಿಸಲು ಕೇರಳ ಸರ್ಕಾರ ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿ 
ಕೆ.ಜಯಕುಮಾರ್ ಅವರನ್ನು ನೇಮಿಸಿತ್ತು. ಈಗ 
ಕೆ.ಜಯಕುಮಾರ್ ಅವರ ಶಿಫಾರಸಿನ ಮೇರೆಗೆ ನಂಬಿ ನಾರಾಯಣ ಅವರಿಗೆ ಪರಿಹಾರ ನೀಡಲು  ಕೇರಳ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಏನಿದು ಪ್ರಕರಣ.....?
1994 ರಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಈ ಪ್ರಕರಣದಲ್ಲಿ ಇಸ್ರೋ ವಿಜ್ಞಾನಿಯಾಗಿದ್ದ ನಂಬಿ ನಾರಾಯಣ ಅವರನ್ನು ಗೂಢಚಾರಿಕೆ ಅವರನ್ನು ಗೂಢಚಾರಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು. ಇಸ್ರೋದ ಕೆಲವು ರಹಸ್ಯ ದಾಖಲೆಗಳನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ ಎಂದು ಆರೋಪಿಸಿ 40 ದಿನಗಳ ಕಾಲ ಜೈಲು ಬಂಧನದಲ್ಲಿದ್ದರು. ಸಿಬಿಐ ವಿಚಾರಣೆಯ ನಂತರ ಅವರ ಮೇಲಿನ ಆರೋಪ ಸುಳ್ಳು ಎಂದು ಸಾಬೀತಾಯಿತು.

ಇನ್ನು ಇದೇ ಪ್ರಕರಣಕ್ಕೆ ಸಂಬಂಧ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಳೆದ ವರ್ಷ ಸುಪ್ರೀಂಕೋರ್ಟ್ 50 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ನಂಬಿ ನಾರಾಯಣರಿಗೆ ನೀಡುವಂತೆ ಕೇರಳ ಸರಕಾರಕ್ಕೆ ಆದೇಶಿಸಿತ್ತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಹ  10 ಲಕ್ಷ ರೂಪಾಯಿಯನ್ನು ನೀಡಬೇಕೆಂದು ಶಿಫಾರಸ್ಸು  ಮಾಡಿತ್ತು.