ಕಿವೀಸ್‌ ನೆಲದಲ್ಲೂ ಕೆಲ ದಾಖಲೆಗಳನ್ನು ಧೂಳೀಪಟ ಮಾಡಲು ಸಜ್ಜಾದ ಕಿಂಗ್ ಕೊಹ್ಲಿ

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಕ್ರಿಕೆಟ್‌ ಸರಣಿ ಆರಂಭಕ್ಕೆ ಕೆಲವು ದಿನಗಳ ಬಾಕಿ ಉಳಿದಿಕೊಂಡಿದೆ. ಟೀಮ್‌ ಇಂಡಿಯಾ ಮೊದಲು ಬಾರಿಗೆ  5 ಪಂದ್ಯಗಳ ಟಿ20 ಸರಣಿಯನ್ನಾಡಲಿದ್ದು, ಆಕ್ಲೆಂಡ್‌ನಲ್ಲಿ  ಮೊದಲ ಪಂದ್ಯ ಜ.24ರಂದು  ನಡೆಯಲಿದೆ.   ಈ ಸರಣಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಪ್ರತಿ ಪಂದ್ಯದಲ್ಲಿ ಒಂದಲ್ಲಾ ಒಂದು ದಾಖಲೆ ಬರೆಯುವುದನ್ನು ರೂಢಿ ಮಾಡಿಕೊಂಡಿರುವ ಕೊಹ್ಲಿ, ನಾಯಕನಾಗಿ ಮತ್ತೊಂದು ವಿಶೇಷ   ಮೈಲುಗಲ್ಲು ಸಾಧಿಸಿಲು ಈ ಸರಣಿಯಲ್ಲಿ ಅವಕಾಶವಿದೆ.ಕಿಂಗ್ ಕೊಹ್ಲಿ  ಆಡಿದ 78 ಪಂದ್ಯಗಳಲ್ಲಿ 74 ಸಿಕ್ಸರ್‌ಗಳನ್ನು ಸಿಡಿಸಿ ಮಿಂಚಿದ್ದಾರೆ. ಇದೀಗ ತಮ್ಮ ಖಾತೆಗೆ 8 ಸಿಕ್ಸರ್‌ಗಳನ್ನು ಸಿಡಿಸಿದ್ದೇ ಆದರೆ ಟಿ-20 ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ಸಿಕ್ಸರ್‌ ಬಾರಿಸಿ 2ನೇ ನಾಯಕ ಎಂಬ ದಾಖಲೆ ನಿರ್ಮಿಸಲ್ಲಿದ್ದರೆ.

ಇಂಗ್ಲೆಂಡ್ ತಂಡದ ನಾಯಕ ಐಯಾನ್‌ ಮಾರ್ಗನ್‌   62 ಸಿಕ್ಸರ್ ಸಿಡಿಸಿ , ನಾಯಕನೊಬ್ಬ ತಂಡದ ಪರ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 50ಕ್ಕೂ ಹೆಚ್ಚು ಸಿಕ್ಸರ್‌ ಸಿಡಿಸಿದ ನಾಯಕರ ಸಾಲಿಗೆ ಕೊಹ್ಲಿ ಕೂಡ ಸೇರ್ಪಡೆಯಾಗುವುದನ್ನು ಎದುರು ನೋಡುತ್ತಿದ್ದಾರೆ.