ನೀಟ್ ಪರೀಕ್ಷೇ ದಿನಾಂಕ ಘೋಷಣೆ : ಜುಲೈ 18 ಕ್ಕೆ ಜೆಇಇ ಪರೀಕ್ಷೆ: ಜುಲೈ 26 ಕ್ಕೆ ನೀಟ್ ಪರೀಕ್ಷೆ

ಕೊರೊ ವೈರಸ್ ಭೀತಿ ಹಿನ್ನಲೆ ಮುಂದೂಡಿಕೆಯಾಗಿದ್ದ ನೀಟ್ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಾಳ್ ಖಾಸಗಿ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

 ದೇಶದಲ್ಲಿ ವಿಧಿಸಿದ್ದ ಲಾಕ್ ಡೌನ್ ಸಡಿಲಿಕೆಯ ಬೆನ್ನಲ್ಲೇ ನೀಟ್ ಹಾಗೂ ಜೆಇಇ ಪರೀಕ್ಷೆ ದಿನಾಂಕ ಪ್ರಕಟಿಸಲಾಗಿದೆ. ಜುಲೈ 18 ಕ್ಕೆ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್ ( ಮೇನ್ಸ್ ) ಪ್ರಾರಂಭವಾಗಲಿದ್ದು ಜುಲೈ 23 ರ ವರೆಗೆ ಪರಿಕ್ಷೇ ನಡೆಯಲಿದೆ. ಜೆಇಇ ಪರಿಕ್ಷೇಗಳು ಮುಗಿದ ನಂತರ ಜುಲೈ 26 ರಿಂದ ನೀಟ್ ಪರಿಕ್ಷೇ ನಡೆಯಲಿದೆ.

ಇನ್ನು ಈ ಕುರಿತು ಟ್ವಿಟ್ ಮಾಡಿರುವ ANI ಸುದ್ದಿಸಂಸ್ಥೆ ,  ಜೆಇಇ ಅಡ್ವಾನ್ಸ್ ಪರೀಕ್ಷೆಯನ್ನು ಆಗಸ್ಟ್ ತಿಂಗಳಲ್ಲಿ ನಡೆಸುವುದಾಗಿ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಾಳ್  ಹೇಳಿದ್ದಾರೆ ಎಂದು ತಿಳಿಸಿದೆ.