ಹರಪನಹಳ್ಳಿ ಪಟ್ಟಣದಲ್ಲಿ ಸವಿತಾ ಸಮಾಜಕ್ಕೆ ಆಹಾರ ಕಿಟ್ ವಿತರಣೆ..

ಹರಪನಹಳ್ಳಿ: ಕೊರೊನ್ ವೈರಸ್ ತಡೆಗಟ್ಟಲು ಇಡೀ ದೇಶವೇ ಲಾಕ್‌ಡೌನ್‌ ಯಾಗಿದೆ  ಇಂತಹ ಸಂದಿಗ್ನ ಪರಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ತಾಲೂಕಿನ ಸವಿತಾ ಸಮಾಜದ ಕುಟುಂಬಗಳಿಗೆ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಪ್ರತಿಷ್ಠಾನ ಮೂಲಕ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರ ನಿರ್ದೇಶನದಲ್ಲಿ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.

ಇದೆ ವೇಳೆ ಮಾತಾನಾಡಿದ ಎಂ.ಪಿ.ಲತಾ ಮಲ್ಲಿಕಾರ್ಜುನ್  ಅವರು ಲಾಕ್‌ಡೌನ್ ಹಿನ್ನಲೆಯಲ್ಲಿ ಯಾರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಕಡು ಬಡವರನ್ನು ಗುರುತಿಸಿ ಅವರಿಗೆ ಅಗತ್ಯವಾದ ಆಹಾರದ ಕಿಟ್ ವಿತರಿಸಲಾಗಿದೆ. ಮೇ.೪ರಿಂದ ತಾಲೂಕಿನಲ್ಲಿ ಸೆಲೂನ್ ಪ್ರಾರಂಭಿಸಲು ಅನುಮತಿ ಇದ್ದರೂ ಸಹ ನೆರೆ ಜಿಲ್ಲೆ  ದಾವಣಗೆರೆ ನಗರದಲ್ಲಿ ಹೆಚ್ಚಿನ
ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಬಂದಿರುವುದರಿಂದ ಇನ್ನೂ ಒಂದಿಷ್ಟು ದಿನ ಸೆಲೂನ್ ಅಂಗಡಿಗಳನ್ನು ತೆರೆಯದಂತೆ ಸವಿತಾ ಸಮಾಜ ನಿರ್ಧರಿಸಿರುವುದು ಜನರ ಆರೋಗ್ಯದ ಹಿತದೃಷ್ಠಿಯಿಂದ ಶ್ಲಾಘನೀಯ ಕಾರ್ಯ ಎಂದು 
ತಿಳಿಸಿದ್ದಾರೆ.