ಬದುಕಿನ ದಾರಿದ್ರ್ಯದ ವಿರುದ್ಧ ಹೋರಾಡಿ ನಾಯಕನಾದೆ : ಸತೀಶ್ ನೀನಾಸಂ...
ಬೆಂಗಳೂರು : ಸತೀಶ್ ನೀನಾಸಂ ಸಿನಿಮಾ ಅಂದ್ರೇನೇ ಸಾಕು, ಪ್ರೇಕ್ಷಕರಲ್ಲಿ ಒಂದು ಸಣ್ಣ ಕುತೂಹಲ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಕಾರಣ ಅವರು ಸಿನಿಮಾ ಮಾಡಲು ಆಯ್ಕೆ ಮಾಡಿಕೊಳ್ಳುವ ಕಥೆ. ತಮ್ಮ ಸಿನಿಮಾಗಳ ಮೂಲಕ ಸಮಾಜಕ್ಕೆ ಒಳ್ಳೇ ಸಂದೇಶ ಕೊಡಬೇಕು ಎಂದು ಯೋಚಿಸುವ ಸತೀಶ್,
ಈಗ ಅದೇ ರೀತಿಯ ಕಥಾಹಂದರವಿರುವ "ಗೋದ್ರಾ " ಶೀರ್ಷಿಕೆಯ ಸಿನಿಮಾದಲ್ಲಿ ಸತೀಶ್ ನಟಿಸುತ್ತಿದ್ದಾರೆ.
ಶುಕ್ರವಾರ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಗೋದ್ರಾ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು , ಚಿತ್ರದ ಕುರಿತು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಟೀಸರ್ ನಲ್ಲಿ ನೀನಾಸಂ ಸತೀಶ್ ಸಮಾಜದಲ್ಲಿನ ಅನ್ಯಾಯದ ವಿರುದ್ಧ ಹೋರಾಡುವ ಕ್ರಾಂತಿಕಾರಿ ಹೋರಾಟಗಾರನ
ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ನನ್ನ ಬದುಕಿನ ವ್ಯಕ್ತಿತ್ವಕ್ಕೂ ನನ್ನ ಸಿನಿಮಾಗಳಿಗೂ ಸಂಭಂಧವಿದೆ.....
ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಗೋದ್ರಾ ಚಿತ್ರದ ನಾಯಕ ನೀನಾಸಂ ಸತೀಶ್ ಮಾತನಾಡಿ , ಇದೊಂದು ನೈಜ ಘಟನೆಗಳ ಆಧಾರಿತ ಚಿತ್ರವಾಗಿದೆ. ಚಿತ್ರದಲ್ಲಿ ಶೋಷಿತ ಜನರ ಪರವಾಗಿ ನಾಯಕ ಹೋರಾಡಲಿದ್ದು, ಸಮಾಜದಲ್ಲಿನ ದಾರಿದ್ರ್ಯ ಹೋಗಲಾಡಿಸಲು ಪರಯತ್ನಿಸುತ್ತಾನೆ.ನಾನು ಕೂಡ ಜೀವನದಲ್ಲಿ ಬಡತನ ಎಂಬ ದಾರಿದ್ರ್ಯದ ವಿರುದ್ಧ ಹೋರಾಡಿ ಇಂದು ನಾಯಕನಾಗಿದ್ದೇನೆ. ಹಾಗಾಗಿ ಈ ಚಿತ್ರದ ಕಥೆ ನನ್ನ ವ್ಯಕ್ತಿತ್ವಕ್ಕೆ ತೀರಾ ಹತ್ತಿರವಾಗಿತ್ತು. ಆದ್ದರಿಂದಲೇ ಈ ಸಿನಿಮಾ ಮಾಡಲು ಒಪ್ಪಿಕೊಂಡೆ.
ನನ್ನ ವ್ಯಕ್ತಿತ್ವ ಅರಿಯಬೇಕಾದರೆ ನಾನು ಮಾಡಿರುವ ಸಿನಿಮಾಗಳನ್ನು ನೋಡಿ ಸಾಕು, ನಿಮಗೆ ನನ್ನ ವ್ಯಕ್ತಿತ್ವ ಅರ್ಥವಾಗುತ್ತದೆ ಎಂದು ಹೇಳಿದರು.
ಇನ್ನು ಚಿತ್ರದಲ್ಲಿ ಸತೀಶ್ ನೀನಾಸಂ ಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಹಾಗೂ ರಕ್ಷಾ ನಟಿಸುತ್ತಿದ್ದು , ಪ್ರಮುಖ ಪಾತ್ರಗಳಲ್ಲಿ ವಶಿಷ್ಠ ಸಿಂಹ ಹಾಗೂ ಅಚ್ಯುತ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಟೋನಿ ಜೋಸೆಫ್ ಸಂಗೀತ ಚಿತ್ರಕ್ಕಿರಲಿದ್ದು , ಜಾಕಬ್ ಫಿಲ್ಮ್ ಹಾಗೂ ಲೀಡರ್ ಫಿಲ್ಮ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತಿದ್ದಾರೆ. ಚಿತ್ರವನ್ನು ಆಂಧ್ರ , ಕೇರಳ , ಸಕಲೇಶಪುರ ಹಾಗೂ ಭಟ್ಕಳದಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಹುತೇಕ ಶೂಟಿಂಗ್ ಮುಗಿದಿದ್ದು ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಚಿತ್ರ ತೆರೆಗೆ ಬರಲಿದೆ.