ಎರಡನೇ ಪಂದ್ಯ ಕೊಹ್ಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ
ಎರಡನೇ ಪಂದ್ಯ ಕೊಹ್ಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ....!
ಭಾರತ-ನ್ಯೂಜಿಲೆಂಡ್ ಎರಡನೇ ಪಂದ್ಯ ಫೆಬ್ರವರಿ 8 ಶನಿವಾರದಂದು ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆಯಲಿದ್ದು,ಸರಣಿ ವಶಪಡಿಸಿಕೊಳ್ಳಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಕೊಹ್ಲಿ ಪಡೆ ಸಿಲುಕಿದೆ. ಆದ್ದರಿಂದ ಎರಡನೇ ಏಕದಿನ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ.
ಮೊದಲ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ ಬೃಹತ್ ಮೊತ್ತವನ್ನೂ ಬೆನ್ನಟ್ಟಿ ಕಿವೀಸ್ 4 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಸಾಧಿಸಿತು. ಆದ್ದರಿಂದ ನ್ಯೂಜಿಲೆಂಡ್ ಕೇವಲ ಒಂದು ಪಂದ್ಯ ಗೆದ್ದರೆ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.
ಆಕ್ಲೆಂಡ್ನ ಈಡನ್ ಪಾರ್ಕ್ ಕ್ರೀಡಾಂಗಣ ವಿಶ್ವದ ಅತಿ ಚಿಕ್ಕ ಕ್ರೀಡಾಂಗಣವಾಗಿದ್ದು ಬೌಂಡರಿ- ಸಿಕ್ಸರ್ಗಳ ಮಳೆ ಸುರಿಯುವುದು ಖಚಿತ. ಭಾರತಕ್ಕೆ ಗೆಲ್ಲಲೇ ಬೇಕಾದ ಪಂದ್ಯವಾಗಿರುವುದರಿಂದ ಕೊಹ್ಲಿ ಪಡೆ ಬಲಿಷ್ಠವಾಗಿ ಕಣಕ್ಕಿಳಿಯಬೇಕಿದೆ.
ಎರಡನೇ ಏಕದಿನ ಪಂದ್ಯ ಫೆ. 8 ರಂದು ಬೆಳಗ್ಗೆ 7:30ಕ್ಕೆ ಆರಂಭವಾಗಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸದ್ಯ ನ್ಯೂಜಿಲೆಂಡ್ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆಯಲ್ಲಿದೆ.