ಲಾಕ್ ಡೌನ್ ಹಿನ್ನಲೆ ತಾವರಗೆರಾ ಪಟ್ಟಣದಲ್ಲಿ ಸರಳವಾಗಿ ಬಸವ ಜಯಂತಿ ಆಚರಣೆ...
ರಾಜ್ಯದಲ್ಲಿ ಕಿಲ್ಲರ್ ಕೊರೋನ ದಿನೇ ದಿನೇ ಬಿಗಿಗೋಳಿಸುತ್ತಿರುವ ಬೆನ್ನಲೇ ಹಾಗೂ 2.0 ಲಾಕ್ ಡೌನ್ ಹಿನ್ನೆಲೆಯಲ್ಲಿ ತಾವರಗೇರಾ ಪಟ್ಟಣದಲ್ಲಿ ಬಸವ ಜಯಂತಿ ಪ್ರಯುಕ್ತವಾಗಿ ಶ್ರೀ ವೀರಭದ್ರೇಶ್ವರ ಜಾತ್ರಾ ಸಮಿತಿ ಹಾಗೂ ಬಸವ ಸಮಿತಿ ವತಿಯಿಂದ ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಬಸವ ಜಯಂತಿಯನ್ನು ಆಚರಿಸಲಾಯಿತು.
ಮಾನವ ಧರ್ಮಕ್ಕೆ ವಿಶ್ವಕ್ಕೆ ಶಾಂತಿ ಸಿಗಲಿ.
ಸರ್ಕಾರದ ಲಾಕ್ ಡೌನ್ ನಿಯಮ ಪಾಲನೆ ಮಾಡೋಣ. ಕೊರೊನಾ ಓಡಿಸೊಣ ಎಂದು ಜಯ ಘೋಷಣೆಯೊಂದಿಗೆ ಸೋಮವಾರ ಬೆಳಗ್ಗೆ 5 ಕೆಜಿ ತೂಕದ ತರಕಾರಿಗಳ 650 ಕಿಟ್ ಕಡುಬಡವರಿಗೆ ಹಂಚಲಾಯಿತು. ಈ ಮೂಲಕ ಮಾನವೀಯತೆ ಮೆರೆಯಲಾಯಿತು.
ಪ್ರಮುಖವಾಗಿ ಬಸವಣ್ಣ ಕ್ಯಾಂಪ್ ಹಾಗೂ ಹಿಂದೂಳಿದ ವಾರ್ಡಗಳಲ್ಲಿ ಹಂಚಲಾಯಿತು ಈ ಸಂದರ್ಭದಲ್ಲಿ ಮುಖಂಡರಾದ ಶೇಖರಗೌಡ ಪೋಲಿಸ್ ಪಾಟೀಲ,ಸೇವಾ ಸಮಿತಿಯ ಅಮರೇಶ ಗಲಿಗಲಿ,ಆದಪ್ಪ ನಾಲತ್ವಾಡ,ಶಂಕರ್ ಕಾಳೆ,ಮಲ್ಲಪ್ಪ ಜುಮಾಲಾಪುರ,ಗುರುಮೂರ್ತಿ ಹಿರೇಮಠ,ಪಾಲಾಕ್ಷ ಹಿರೇಮಠ,ಸಂಗಪ್ಪ ಕೋರಿ,ಕುಡ್ಲೆಪ್ಪ ಬಾಳೃತೋಟ,ಪಂಪಣ್ಣ ಚಿಟ್ಟಿ,ಶರಣೆಗೌಡ ಅಬ್ಬಿಗೇರಿ,ಪ್ರಶಾಂತ ಬಳ್ಳಾರಿ,ಶ್ಯಾಮೂರ್ತಿ ಕಟ್ಟಿಮನಿ ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು
ವರದಿ : ಶರಣಪ್ಪ ಕುಂಬಾರ ತಾವರಗೇರಾ