ಸಂಗೀತ ವಿಧ್ವಾಂಸ ರಾ. ಸತ್ಯನಾರಾಯಣ ನೆನ್ನೆ ರಾತ್ರಿ ವಿಧಿವಶರಾದರು...

ಮೈಸೂರು: ಸಂಗೀತ ವಿದ್ವಾಂಸ ರಾ. ಸತ್ಯನಾರಾಯಣ ಅವರು ನಿನ್ನೆ ವಿಧಿವಶರಾಗಿದ್ದಾರೆ. 93 ವಯಸ್ಸಿನ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನೆನ್ನೆ ರಾತ್ರಿ ಜಯನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಇಂದು ಚನ್ನಪಟ್ಟಣದ ಬಳಿ ನಿರ್ಮಿಸಿರುವ ರಸರುಷಿ ಪ್ರತಿಷ್ಠಾನದ ಸಂಶೋಧನ ಕೇಂದ್ರದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಿದವು. 2018ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಅವರು, ರಾಜ್ಯ ಮತ್ತ ರಾಷ್ಟ್ರ ಮಟ್ಟದ ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಮಹಾನ್ ವ್ಯಕ್ತಿ ಅನಿಸಿಕೊಂಡಿದ್ದರು. ಕರ್ನಾಟಕ ಸಂಗೀತದಲ್ಲಿ ಮೈಸೂರಿಗೆ ಕೀರ್ತಿ ತಂದುಕೊಟ್ಟ ಮಹಾ ಪ್ರತಿಮೆ ಅಂತಲೂ ಅವರನ್ನ ಕರೆಯಲಾಗ್ತಿತ್ತು.

ಉಪ ಪೊಲೀಸ್ ಆಯುಕ್ತ ಮುತ್ತುರಾಜ್ ನೇತೃತ್ವದಲ್ಲಿ ಗೌರವ ವಂದನೆ, ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸರ್ಕಾರಿ ಗೌರವವನ್ನ ಸಲ್ಲಿಸಲಾಯಿತು.