ಪೇಜಾವರ ಶ್ರೀಗಳ ಆರೋಗ್ಯ ಇನ್ನು ಗಂಭೀರ

ಉಡುಪಿ : ಕಳೆದ ಎರಡು ದಿನಗಳ ಹಿಂದೆ ಉಸಿರಾಟದ ತೊಂದರೆ ಹಾಗೂ ನ್ಯುಮೋನಿಯಾದ ಕಾರಣದಿಂದಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಪೇಜಾವರ ಶ್ರೀಗಳು ದಾಖಲಾಗಿದ್ದರು. ಪೇಜಾವರ ಶ್ರೀಗಳನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊಂಡಿರುವುದಾಗಿ ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದೆ.

ಅನಾರೋಗ್ಯದಿಂದಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಅಷ್ಠಮಠಗಳಲ್ಲಿ ಒಂದಾದಂತ ಪೇಜಾವರ ಮಠದ ವಿಶ್ವೇಶ್ವರ ಭಾರತೀ ಶ್ರೀಗಳು ದಾಖಲಾಗಿದ್ದರು. ಶ್ರೀಗಳನ್ನು ಪರೀಕ್ಷೆಗೆ ಒಳಪಡಿಸಿದ್ದ ವೈದ್ಯರು ಉಸಿರಾಟದ ತೊಂದರೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು.

ಈ ಬಳಿಕ ಶ್ರೀಗಳನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೇ ಈಗ ಶ್ರೀಗಳ ಆರೋಗ್ಯ ಮತ್ತಷ್ಟು ಗಂಭೀರಗೊಂಡಿರುವುದಾಗಿ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೇ ಐಸಿಯುನಲ್ಲಿಯೇ ಶ್ರೀಗಳ ಚಿಕಿತ್ಸೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.