ಫೆಬ್ರವರಿ 01 ರಂದು ವರ್ಷದ ಮೊದಲ ಕೇಂದ್ರ ಬಜೆಟ್ ಮಂಡನೆ : ಎರಡು ಹಂತದಲ್ಲಿ ಬಜೆಟ್ ಅಧಿವೇಶನ ನಡೆಸಲು ಸಿದ್ಧತೆ.
ನವದೆಹಲಿ : ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 01ರಂದು ಮಂಡನೆಯಾಗಲಿದೆ. ಈ ಬಾರಿ ಎರಡು ಹಂತದಲ್ಲಿ ಬಜೆಟ್ ಅಧಿವೇಶನ ನಡೆಸಲು ಕೇಂದ್ರ ಸಚಿವ ಸಂಪುಟದ ಸಂಸದೀಯ ವ್ಯವಹಾರಗಳ ಸಮಿತಿ ಶಿಫಾರಸು ಮಾಡಿದೆ.
2020-21 ನೇ ಸಾಲಿನ ಕೇಂದ್ರ ಬಜೆಟ್ ಫೆಬ್ರವರಿ 1 ರಂದು ಮಂಡನೆಯಾಗಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಸರಕು ಮತ್ತು ಸೇವೆಗಳ ಬಳಕೆಗೆ ಉತ್ತೇಜನ ನೀಡುವುದು, ವೈಯಕ್ತಿಕ ಆದಾಯ ತೆರಿಗೆಯಲ್ಲಿ ವಿನಾಯತಿ ನೀಡುವುದು ಸೇರಿದಂತೆ ಹಲವು ಪ್ರಮುಖ ಅಂಶಗಳ ಬಗ್ಗೆ ಕೇಂದ್ರ ಬಜೆಟ್ ಗೂ ಮುನ್ನ ಚರ್ಚೆ ನಡೆದಿದೆ.
ವೈಯಕ್ತಿಕ ಆದಾಯ ತೆರಿಗೆ ಮಿತಿ ಬದಲಾವಣೆಗೆ ಮುಂದಾಗಿದೆ. ಹಾಲಿ 5 ಲಕ್ಷ ರೂ. ನಿಂದ 10ಲಕ್ಷ ರೂ. ವರೆಗಿನ ಆದಾಯಕ್ಕೆ ಶೇಕಡ 20ರಷ್ಟು ತೆರಿಗೆಯನ್ನು ಶೇ. 10 ಪ್ರಮಾಣಕ್ಕೆ ತಗ್ಗಿಸುವ ಬಗ್ಗೆ ಚಿಂತನೆ ಇದೆ.