ಮುಗಿಯುತು ಎಲ್ಲಾ ಆಟ: ನಿರ್ಭಯಾ ಅತ್ಯಾಚಾರಿಗಳ ಕೊರಳಿಗೆ ಬಿತ್ತು ಕುಣಿಕೆ

ದೆಹಲಿ: ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಿಗೆ, ಕೊನೆಗೂ ಗಲ್ಲುಶಿಕ್ಷೆಯಾಗಿದೆ. ಮಧ್ಯರಾತ್ರಿ ದೆಹಲಿ ಹೈಕೋರ್ಟ್​ ಹಾಗೂ ಸುಪ್ರೀಂಕೋರ್ಟ್​ ಹೈಡ್ರಾಮಾ ಬಳಿಕವೂ, ಕೀಚಕರಿಗೆ ಶಿಕ್ಷೆಯಿಂದ ಪಾರಾಗಲು ಯಾವುದೇ ಅವಕಾಶ ಸಿಗಲಿಲ್ಲ. ಹೀಗಾಗಿ ಬೆಳಗ್ಗೆ ಸರಿಯಾಗಿ 05:30ಕ್ಕೆ ನಾಲ್ವರು ಅಪರಾಧಿಗಳಾದ ಅಕ್ಷಯ್​ ಠಾಕೂರ್, ವಿನಯ್​ ಶರ್ಮಾ, ಮುಖೇಶ್​ ಸಿಂಗ್​ ಹಾಗೂ ಪವನ್​ ಗುಪ್ತಾ ನೇಣುಗಂಬವೇರಿದರು.

ಈ ಮೂಲಕ ಬರೋಬ್ಬರಿ 8 ವರ್ಷಗಳ ಬಳಿಕ ಕೀಚಕರ ಸಂಹಾರವಾಗಿದ್ದು, ನಿರ್ಭಯಾ ಸಾವಿಗೆ ನ್ಯಾಯ ಸಿಕ್ಕಂತಾಗಿದೆ. ಇನ್ನು ದೆಹಲಿಯಲ್ಲಿನ ತಿಹಾರ್​​ ಜೈಲಿನ ಹೊರಗಡೆ ಸಹಸ್ರಾರು ಜನರು ಸೇರಿದ್ದು, ಇದು ನಿರ್ಭಯಾಗೆ ಸಿಕ್ಕ ನ್ಯಾಯ. ನಿರ್ಭಯಾ ಅವರ ತಾಯಿಯ ಹೋರಾಟಕ್ಕೆ ಸಿಕ್ಕ ಜಯ ಅಂತಾ ಘೋಷಣೆ ಕೂಗುತ್ತಿದ್ದಾರೆ.