ಡಿಸಿಎಂ ಹುದ್ದೆ ರದ್ದು ..?

ಪ್ರಸ್ತುತ ಸರ್ಕಾರದಲ್ಲಿ  ಮೂರು ಡಿಸಿಎಂ ಹುದ್ದೆ (ದಲಿತ ಒಕ್ಕಲಿಗ ವೀರಶೈವ ) ನೀಡಲಾಗಿದೆ. 
ಈ ಮಧ್ಯೆ ಉಪಚುನಾವಣೆ ಪೂರ್ವ ದಲ್ಲಿ  ಕಾಂಗ್ರೆಸ್ ಜೆಡಿಎಸ್ ನಿಂದ ವಲಸೆ ಬಂದಿದ್ದವರ ಪೈಕಿ ರಮೇಶ್ ಜಾರಕಿಹೋಳಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗುವುದು ಎಂದು ಬಿಂಬಿಸಲಾಗಿದೆ.

ಬದಲಾದ ರಾಜಕೀಯ ವಿದ್ಯಾಮಾನಗಳಿಂದ ವಾಲ್ಮೀಕಿ ನಾಯಕ ಬಿ.ಶ್ರೀರಾಮುಲು ಅವರೂ ಕೂಡ ಹುದ್ದೆಯ ಆಕಾಂಕ್ಷಿಯಾಗಿದ್ದು 
ಯಾರಿಗೆ ಕೊಡಬೇಕು ಎಂದುದು ಸದ್ಯ ಯಡಿಯೂರಪ್ಪನವರಿಗೆ  ಕಗ್ಗಂಟಾಗಿದೆ .
ಈ ಸಂಭಂದ ಇದೇ  22 ರಂದು ಸಂಪುಟ ವಿಸ್ತರಣೆ ಆಗುವ ಸಂಭವವಿದ್ದು ಅಂದು ನಡೆಯುವ ಸಭೆಯಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನೇ ರದ್ದುಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.

ಇದಕ್ಕೆ ಸೊಪ್ಪು ಹಾಕುವಂತೆ ಆರ್ ಅಶೋಕ್ ಕೂಡ ಧ್ವನಿಗೂಡಿಸಿದ್ದು  ಡಿಸಿಎಂ ಹುದ್ದೆ ಅವಶ್ಯಕತೆ ಇಲ್ಲಾ ಎಂದು ಹೇಳುವ ಮೂಲಕ  ಡಿ.ಸಿ.ಎಂ ಹುದ್ದೆ ರದ್ದುಗೊಳ್ಳುವುದು ಬಹುತೇಕ ಖಚಿತವಾಗಿದೆ .